ಗಂಡ ಹೆಂಡತಿಯನ್ನು ಬೆಳಿಗ್ಗೆ ಎಬ್ಬಿಸುತ್ತಾನೆ:
ಗಂಡ : ಬಾರೇ, ಬೆಳಿಗ್ಗೆ ಯೋಗಾ ಮಾಡಿದ್ರೆ ಒಳ್ಳೆಯದು.
ಹೆಂಡತಿ : ನೀವು ಹೇಳೋದು ಏನೂಂತಾ? ನಾನು ದಪ್ಪ ಅಂತಾನ?
ಗಂಡ : ಇಲ್ಲ. ಯೋಗಾ ಆರೋಗ್ಯಕ್ಕೆ ಒಳ್ಳೆಯದು ಅಂತ.
ಹೆಂಡತಿ : ಅಂದ್ರೆ ನನ್ನ ಆರೋಗ್ಯ ಸರಿ ಇಲ್ಲ ಅಂತಾನ?
ಗಂಡ : ಹೋಗ್ಲಿ ಬಿಡು. ಏಳಬೇಡ.
ಹೆಂಡತಿ : ಅಂದರೆ ನಾನು ಸೋಮಾರಿ ಅಂತ...
ಗಂಡ : ಹಾಗಲ್ಲ. ನಿನಗೆ ನಾನು ಹೇಳಿದ್ದು ಅರ್ಥ ಆಗಿಲ್ಲ.
ಹೆಂಡತಿ : ಅಂದ್ರೆ ನಾನು ನಿಮ್ಮನ್ನ ಅರ್ಥ ಮಾಡಿಕೊಂಡಿಲ್ಲ ಅಂತ ನಿಮ್ಮರ್ಥ..
ಗಂಡ : ನಾನು ಹಾಗೆ ಹೇಳಲಿಲ್ಲ
ಹೆಂಡತಿ : ಅಂದರೆ ನಾನು ಸುಳ್ಳು ಹೇಳ್ತೀನಿ ಅಂತ...
ಗಂಡ : ಎ.. ಸುಮ್ಮನೆ ಬೆಳಿಗ್ಗೆ ಬೆಳಿಗ್ಗೆ ತಲೆ ತಿನ್ನಬೇಡ.
ಹೆಂಡತಿ : ಅಂದ್ರೆ ನಾನು ಜಗಳಗಂಟಿ ಅಂತ...
ಗಂಡ : ಹೋಗ್ಲಿ ಬಿಡು.. ನಾನೂ ಯೋಗಕ್ಕೆ ಹೋಗದಿರೋದೇ ಒಳ್ಳೆದು..
ಹೆಂಡತಿ : ನೋಡಿ ಅದೇ ನಾನು ಹೇಳಿದ್ದು. ನಿಮಗೂ ಹೋಗಕ್ಕೆ ಮನಸ್ಸಿರಲಿಲ್ಲ. ಸುಮ್ಮನೆ ನನ್ನ ತಲೆ ಮೇಲೆ ಗೂಬೆ ಕೂರ್ಸೋದು.
ಗಂಡ : ಸರಿ ಮಹಾತಾಯಿ.. ನೀನು ನಿದ್ದೆ ಮಾಡು.. ನಾನು ಒಬ್ನೇ ಹೋಗ್ತೀನಿ.. ಸರೀನಾ?
ಹೆಂಡತಿ : ಅದೇ... ನಿಮಗೆ ಎಲ್ಲ ಕಡೆಗೂ ಒಬ್ರೇ ಹೋಗಕ್ಕೆ ಇಷ್ಟ.
ಗಂಡ : ಅಯ್ಯೋ ಮಹಾತಾಯಿ.. ನಿಲ್ಸು.. ನನ್ನ ತಲೆ ಸುತ್ತುತ್ತಾ ಇದೆ...
ಹೆಂಡತಿ : ಅದೇ ನೋಡಿ.. ನಿಮಗೆ ಯಾವಾಗ್ಲೂ ನಿಮ್ಮ ಆರೋಗ್ಯದ ಬಗ್ಗೆಯೇ ಯೋಚನೆ. ನನ್ನ ಬಗ್ಗೆ ಚೂರೂ ಚಿಂತೆಯಿಲ್ಲ ನಿಮಗೆ